ತುಂಬಾ ಕಡಿಮೆ ಹಣದಲ್ಲಿ ಸಮಾರಂಭಗಳನ್ನು ಮಾಡಬೇಕಾ ?
ಹಾಗಾದರೆ ಇಲ್ಲಿದೆ ಸೂಪರ್ ವೆಬ್ ಸೈಟ್ “ಶುಭಂ ಫರ್ ಎವೆರಿಥಿಂಗ್” ನಿಮ್ಮ ಎಲ್ಲಾ ಅಗತ್ಯತೆಗಳಿಗೆ.
ಈಗಿನ ಕಾಲದಲ್ಲಿ ಒಂದು ಮದುವೆ ಮಾಡುತ್ತೇವೆ ಅಂದರೆ ಎಷ್ಟು ಖರ್ಚು ಬರುತ್ತದೆ ಅಂತ ನಿಮ್ಮೆಲ್ಲರಿಗೂ ಗೊತ್ತು. ಅದಕ್ಕೆ ದೊಡ್ಡವರು “ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು” ಗೊತ್ತಾಗುತ್ತದೆ ಅಂತಾರೆ ಅದೂ ನಿಜವೇ. ಒಂದು ಮದುವೆ ಅಥವಾ ಒಂದು ಮನೆ ಕಟ್ಟಿದರೆ ಜೀವನ ಪೂರ್ತಿ ಅದರ ಸಾಲ ತೀರಿಸುವುದರಲ್ಲೇ ಜೀವನ ಮುಗಿದು ಹೋಗಿರುತ್ತದೆ. ಹಾಗಂತಾ ಮದುವೆ ಆಗದೆ ಇರಲು ಆಗುತ್ತಾ? ಇಲ್ಲ ಅಲ್ವಾ?

ಒಂದು ಸಮಾರಂಭ ಮಾಡುತ್ತೆವೆ ಅಂದುಕೊಂಡರೆ ಬಹಳ ಕೆಲಸ ಹಾಗೂ ಜನರ ಅಗತ್ಯತೆ ಖಂಡಿತವಾಗಿ ಇರುತ್ತದೆ. ಉದಾಹರಣೆಗೆ ಸಮಾರಂಭಕ್ಕೆ ಫಂಕ್ಷನ್ ಹಾಲ್, ಅಡುಗೆಯವರು, ಹೂವಿನ ಅಲಂಕಾರ ಮಾಡುವವರು, ಸಂಗೀತ ಕಛೇರಿ,ಪೂಜಾರಿಗಳು, ವಧುವಿನ ಅಲಂಕಾರ ಮಾಡುವವರು, ಆಮಂತ್ರಣ ಪತ್ರ ಮಾಡುವವರು, ಶಾಮಿಯಾನ, ಮೆಹೆಂದಿ, ಲೈಟಿಂಗ್ಸ್, ಚಪ್ಪರ, ಫೋಟೋಗ್ರಾಫರ್ ರವರು ಮತ್ತು ಹಲವು ಹೀಗೆ ಹೇಳಿಕೊಂಡು ಹೊರಟರೆ ಇದು ಮುಗಿಯುವುದೇ ಇಲ್ಲ. ಜೀವನದಲ್ಲಿನ ಆ ಒಂದು ಕ್ಷಣಕ್ಕಾಗಿ ಇಡೀ ಜೀವನದ ಎಲ್ಲಾ ದುಡಿಮೆಯನ್ನು ಖರ್ಚು ಮಾಡಲು ಸಿದ್ಧವಾಗಿರುವಾಗ ಅದು ನಮ್ಮ ಅಂದಾಜಿಸಿದ ಮೊತ್ತವನ್ನು ಮೀರಿ ವ್ಯಯವಾಗಬಹುದು.
ಎಲ್ಲರಿಗೂ ತುಸು ಕಡಿಮೆ ಖರ್ಚಿನಲ್ಲಿ ಸಮಾರಂಭವು ಅದ್ದೂರಿಯಾಗಿ ಮುಗಿದರೆ ಎಲ್ಲರಿಗೂ ಸಂತೋಷವೇ ಅಲ್ಲವೇ? ಇದ್ದನ್ನು ನಿಜವಾಗಿಸಲು ಶುಭಂ ಈ ಒಂದು ಅದ್ಭುತವಾದ ವೆಬ್ ಸೈಟನ್ನು ತಯಾರಿಸಿದ್ದು, ಇಲ್ಲಿ ನಿಮಗೆ ಸಮಾರಂಭಕ್ಕೆ ಬೇಕಾದ ಎಲ್ಲ ರೀತಿಯ ಸೇವೆಗಳು ಲಭ್ಯವಿದ್ದು ನಿಮಗೆ ಬೇಕಾದ ರೀತಿಯಲ್ಲಿ ಸೇವೆಗಳನ್ನು ಸೆಲೆಕ್ಟ್ ಮಾಡಿಕ್ಕೊಳಬಹುದು.
ಮೇಲೆ ಹೇಳಿದಂತೆ ಈ ಮುಂದು ನೀವು ಅಥವಾ ನಿಮ್ಮವರು ಬಹಳ ಹಣವನ್ನು ದುಂದು ವೆಚ್ಚ ಮಾಡಿರಬಹುದು ಅದಕ್ಕೆ ಮುಖ್ಯವಾದ ಕಾರಣವನ್ನು ನಿಮ್ಮಗೆ ತಿಳಿಯಬಯಸುತ್ತೆನೆ, ಅದೇನೆಂದರೆ ನಮಗೆ ನಮ್ಮ ಸುತ್ತ ಇರುವ ಸೇವಾದರಾರ ತಿಳುವಳಿಕೆ ಇಲ್ಲದಿರುವುದು ಆದ್ದರಿಂದ ನಾವು ನಮಗೆ ತಿಳಿದವರು ಕೇಳಿದಷ್ಟು ಹಣವನ್ನು ಕೊಟ್ಟು ಅವರಿಂದ ಸೇವೆಯನ್ನು ಪಡೆಯುತ್ತೇವೆ , ಅದೇ ನಮ್ಮ ಮುಂದೆ ಹಲವು ಆಯ್ಕೆಗಳು ಇದ್ದರೆ ಹೊರಗೆ ಪ್ರತಿ ಸೇವೆಗಳಿಗೆ ಇರುವ ಅಂದಾಜು ಬೆಲೆಗಳು ತಿಳಿವುತ್ತವೆ ಹಾಗೂ ನಮಗೆ ಸರಿ ಅಂತ ತಿಳಿದರೆ ನಾವು ಸೂಕ್ತ ಸೇವಾದರಾರನ್ನು ಬುಕ್ ಮಾಡಿಕೊಳ್ಳಬಹುದು.
ನಮ್ಮ ಸುತ್ತ ಇರುವ ಸೇವಾದರಾರು ನಮ್ಮ ಸಮಾರಂಭ ಇರುವ ದಿವಸ ಹಲವು ಬೇರೆ ಸಮಾರಂಭಕ್ಕೆ ಒಪ್ಪಿಕೊಂಡಿದ್ದರೆ ಬೇರೆ ಸೇವದರಾರನ್ನು ಹುಡುಕಬೇಕಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ವೆಬ್ ಸೈಟ್ ನಲ್ಲಿ ನಿಮಗೆ ಹಲವು ಆಯ್ಕೆಗಳು ದೊರೆಯುತ್ತವೆ.
ಇಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ಸಮಾರಂಭಕ್ಕೆ ಬೇಕಾದ ಎಲ್ಲ ಸೇವೆಗಳನ್ನು ನೀವು ಕಂಡುಕೊಳ್ಳಬಹುದು ಹಾಗೂ ಈ ವೆಬ್ ಸೈಟ್ ನಲ್ಲಿ ಶುಭ ಕಾರ್ಯಗಳಲ್ಲದೆ , ಹುಟ್ಟುಹಬ್ಬದ ,ಪಾರ್ಟಿಗಳಿಗೆ ಹಾಗೂ ಕಾರ್ಪರೇಟ್ ಈವೆಂಟ್ ಗಳಿಗೆ ಬೇಕಾದ ಎಲ್ಲ ತಯಾರಿಗಳನ್ನು ಕೇವಲ ನಿಮಿಷಗಳಲ್ಲಿ ಮಾಡಿ ಮುಗಿಸಬಹುದು.
ಶುಭಂ ಫರ್ ಎವೆರಿಥಿಂಗ್ ನಲ್ಲಿ ಕೇವಲ ಶುಭ ಸಮಾರಂಭಗಳಿಗಲ್ಲದೆ ಬೇರೆ ರೀತಿಯ ಕಾರ್ಯಗಳಿಗೆ ಸಹಾಯ ಮಾಡುವವರು ಕೂಡ ಸಿಗುತ್ತಾರೆ. ನಮ್ಮ ಪ್ರೀತಿ ಪಾತ್ರರು ಅಗಲಿದಾಗ ಆ ಕ್ಷಣವೂ ದುಃಖದಿಂದ ಇರಬಹುದು ಆದರೆ ಅವರಿಗೆ ಒಂದು ಗೌರವಾನ್ವಿತ ಬೀಳ್ಕೊಡುಗೆ ಯನ್ನು ಕೊಡವುದು ನಮ್ಮ ಕರ್ತವ್ಯ.ಇದಕ್ಕೆ ಸಂಭಂದಿಸಿದ ಎಲ್ಲಾ ಕಾರ್ಯಗಳನ್ನು ಮಾಡಲು ಸಹ ಇಲ್ಲಿ ಸೇವೆ ಮಾಡುವವರು ಸಿಗುತ್ತಾರೆ.
ನಮಗೆ ತಿಳಿದಿರುವಂತೆ ಸಾಮಾನ್ಯವಾಗಿ ಸಮಾರಂಭಗಳಿಗೆ ಸೇವೆಸಲ್ಲಿಸುವವರ ಆದಾಯವು ತುಂಬಾ ಕಡಿಮೆ ಇರುತ್ತದೆ. ನಿಮಗೆ ತಿಳಿದಿದೆಯೇ ? ಒಂದು ಬ್ಯುಸಿನೆಸ್ ಅನ್ನು ಆನ್ಲೈನ್ ಗೆ ತರಲು ಹಾಗೂ ಅದನ್ನು ನೋಡಿಕೊಳ್ಳಲು ವರ್ಷಕ್ಕೆ ಕಡಿಮೆ ಎಂದರೂ ಲಕ್ಷ ರೂಪಾಯಿಗಳ ಅವಶ್ಯಕತೆ ಇರುತ್ತದೆ. ಇದಕ್ಕೆ ಬೇಕಾದ ಹಣವನ್ನು ಹಾಕಲು ಸೇವದರಾರ ಹತ್ತಿರ ಅವಶ್ಯವಾದ ಹಣಕಾಸಿನ ಅಭಾವವಿರುವುದರಿಂದ ಅವರು ಈ ವೆಬ್ ಸೈಟ್ನಲ್ಲಿ ತಮ್ಮ ಒಂದು ಅಕೌಂಟ್ ಅನ್ನು ಮಾಡಿ ತಮ್ಮ ಸುತ್ತಲಿನ ಜನಗಳಿಗೆ ಬೇಕಾದ ಸೇವೆಯನ್ನು ಮಾಡಿಕೊಡಬಹುದು ಇದರಿಂದ ಸೇವಾದಾರಿಗೆ ಆದಾಯ ಹೆಚ್ಚುತ್ತದೆ ಮತ್ತು ಜನರಿಗೆ ಸೂಕ್ತವಾದ ಬೆಲೆಗೆ ಸೇವೆಯೂ ಲಭಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ Shubham for everything ಅಥವಾ ಗೂಗಲ್ ನಲ್ಲಿ shubham for everything ಎಂದು ಸರ್ಚ್ ಮಾಡಿ ಭೇಟಿ ಕೊಡಿ.